ಪೂರ್ವರಂಗ
ತೆಂಕುತಿಟ್ಟಿನ ಪೂರ್ವರಂಗದ ಕುಣಿತದ ಕ್ರಮಗಳು ತೆರೆಯ ಮರೆಗೆ ಸರಿಯುತ್ತಿರುವ ಈ ಸಂದರ್ಭದಲ್ಲಿ, ಕಟೀಲು ಮೇಳದ ಯಕ್ಷಗಾನ ಪ್ರದರ್ಶನಗಳಲ್ಲಿ ಈಗಲೂ ಪೂರ್ವರಂಗವನ್ನು ಶ್ರದ್ಧೆಯಿಂದ ಯುವಕಲಾವಿದರು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು.
ಚಿತ್ರದಲ್ಲಿ: ಹೊಗಳಿಕೆ ಹಾಸ್ಯಗಾರನಾಗಿ ರವಿಶಂಕರ್ ವಳಕ್ಕುಂಜ ಹಾಗೂ ಸ್ತ್ರೀವೇಷಗಳಲ್ಲಿ ಸಹಕಲಾವಿದರು.
ದಿನಾಂಕ: ೧೯ ಮಾರ್ಚ್ ೨೦೧೧
ರವಿಶಂಕರ ವಳಕ್ಕುಂಜ ಇವರು ಪ್ರಸ್ತುತ ಕಟೀಲು ಮೇಳದಲ್ಲಿ ಮುಖ್ಯ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸಿದ್ಧ ಹಾಸ್ಯಗಾರರಾದ ನಯನ ಕುಮಾರ್ ರ ಅಳಿಯ(ಅಕ್ಕನ ಮಗ)ನಾದ ವಳಕ್ಕುಂಜರು ಪರಂಪರೆಯ ಹಾಸ್ಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಇವರ ಮುದಿಯಪ್ಪಣ್ಣ, ಬಾಹುಕ, ದೇವದೂತ, ರಾಕ್ಷಸದೂತ ಪಾತ್ರಗಳು ಪ್ರೇಕ್ಷಕರನ್ನು ಮುದಗೊಳಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಸುಬ್ರಾಯ ಹೊಳ್ಳ ಹಾಗೂ ವಳಕ್ಕುಂಜರು ರಂಗದಲ್ಲಿ ಜತೆಯಾಗಿ ಪ್ರೇಕ್ಷಕರಿಗೆ ನಗೆಯೂಟದ ರಸದೌತಣವುಣಿಸುವುದರಲ್ಲಿ ನಿಸ್ಸೀಮರು.
ತುಳಸಿ ಜಲಂಧರ ಪ್ರಸಂಗದ ತುಣುಕುಗಳು ಯುಟ್ಯೂಬ್ ನಲ್ಲಿ - http://www.youtube.com/watch?v=swCGk6wPz-U http://www.youtube.com/watch?v=klJToNBHq40